ಶ್ರೀ ದತ್ತಸ್ವರೂಪಿ ಪದ್ಮಾತಾಯಿ ದತ್ತ ಮಂದಿರ
ಶ್ರೀ ದತ್ತಸ್ವರೂಪಿ ಪದ್ಮಾತಾಯಿ ದತ್ತಮಂದಿರ
ಶ್ರೀ ದತ್ತಸ್ವರೂಪಿ ಪದ್ಮಾತಾಯಿ ದತ್ತ ಮಂದಿರವು ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ಹೊಸೂರು ಎಂಬ ಹಳ್ಳಿಯಲ್ಲಿದೆ. ಇದನ್ನು ಶ್ರೀ ದತ್ತಸ್ವರೂಪಿ ಪದ್ಮಾತಾಯಿಯವರು ವಾಸಿಸುತ್ತಿದ್ದ ಸ್ಥಳದಲ್ಲಿಯೇ ನಿರ್ಮಿಸಲಾಯಿತು. ಅವರ ತಪಸ್ಸು, ದತ್ತ ಪೂಜೆ, ಯಜ್ಞ, ಮತ್ತು ಹಲವಾರು ಜನರ ನೋವು ಮತ್ತು ಸಂಕಟಗಳನ್ನು ನಿವಾರಿಸಿದ ಮನೆಯನ್ನು ನವೀಕರಿಸಲಾಯಿತು ಮತ್ತು ಇಂದಿನ ಭವ್ಯ ಮಂದಿರವನ್ನು ಪುನಃಸ್ಥಾಪಿಸಲಾಯಿತು. ಈ ದೇವಾಲಯವನ್ನು 2011 ರಲ್ಲಿ ಭಕ್ತರಿಗೆ ತೆರೆಯಲಾಯಿತು. ಆರತಿ ಮತ್ತು ಪೂಜೆಗಳನ್ನು ಪ್ರತಿದಿನ ನಡೆಸಲಾಗುತ್ತದೆ ಮತ್ತು ಗುರು ಪೂರ್ಣಿಮ, ದತ್ತ ಜಯಂತಿ ಮತ್ತು ಶ್ರೀ ದತ್ತ ಸ್ವರೂಪಿ ಪದ್ಮತಾಯಿ ಜಯಂತಿ ಮುಂತಾದ ಆಯ್ದ ಹಬ್ಬದ ಸಂದರ್ಭಗಳಲ್ಲಿ ಹೋಮವನ್ನು ನಡೆಸಲಾಗುತ್ತದೆ. ದೇವಾಲಯದ ಎದುರಿನ ಪ್ರತ್ಯೇಕ ಜಾಗದಲ್ಲಿ ಶ್ರೀ ಕುಂಜ ಭವನವನ್ನು ಇತ್ತಿಚೀಗೆ ನಿರ್ಮಿಸಲಾಯಿತು. ಇದು ನೂರಾರು ಭಕ್ತರಿಗೆ ದಾಸೋಹಾ ಮಂದಿರವಾಗಿ ಕಾರ್ಯನಿರ್ವಹಿಸುತ್ತಿದೆ . ದೂರದ ಸ್ಥಳಗಳಿಂದ ಬರುವ ಭಕ್ತರಿಗೆ ವಸತಿಗಾಗಿ ಕೊಠಡಿಗಳಿವೆ. ಪ್ರವಾಸಿಗರು 10 ಕಿ.ಮೀ ದೂರದಲ್ಲಿರುವ ಶಿಗ್ಗಾಂವ್‌ನಿಂದ ಅಥವಾ 20 ಕಿ.ಮೀ ದೂರದಲ್ಲಿರುವ ತಡಸದಿಂದ ರಸ್ತೆ ಮೂಲಕ ಹೊಸೂರಿಗೆ ತಲುಪಬಹುದು.
ಭಗವಾನ್ ದತ್ತಾತ್ರೇಯ ಇರಿಸಿದ ಇಟ್ಟಿಗೆಗಳು
ಡಿ
ಪದ್ಮಾತಾಯಿಯವರ ಶರೀರದಿಂದ ದತ್ತಾತ್ರೇಯರ ಅವತಾರವಾದ ನಂತರ, ಪೂಜಾ ಸ್ಥಳವನ್ನು ನಿರ್ಮಿಸಲು ಇಟ್ಟಿಗೆಗಳನ್ನು ತರಲಾಯಿತು. ಒಂದು ದಿನ ಪದ್ಮಾತಾಯಿಯವರು ಮತ್ತು ವೆಂಕಟರಾವ್ರವರು ಹುಬ್ಬಳ್ಳಿಗೆ ಹೋಗಿದ್ದರು. ಅವರು ಮರುದಿನ ಹಿಂತಿರುಗಿದಾಗ, ಪ್ರಸ್ತುತ ಗರ್ಭಗೃಹದಲ್ಲಿ ಸ್ವತಃ ಇಟ್ಟಿಗೆಗಳು ಸಾಲಾಗಿ ಕಟ್ಟೆಯ ಆಕಾರದಲ್ಲಿ ಜೋಡಿಸಲ್ಪಟ್ಟಿದ್ದವು . ಪಶ್ಚಿಮ ಮತ್ತು ಉತ್ತರದ ಗೋಡೆಗಳ ನಡುವಿನ ಮೂಲೆಯಲ್ಲಿ ಇಟ್ಟಿಗೆಗಳನ್ನು ಮೆಟ್ಟಿಲುಗಳ ರೂಪದಲ್ಲಿ ಜೋಡಿಸಲಾಗಿತ್ತು ಮತ್ತು ಒಂದು ವೇದಿಕೆಯು ರಚಿಸಲ್ಪಟ್ಟಿತ್ತು , ಇದನ್ನು ಇಂದು ಕೂಡ ಮಂದಿರದಲ್ಲಿ ಹಾಗೆ ಉಳಿಸಿಕೊಂಡಿದ್ದಾಗಿದೆ .ಪೂಜಾ ವೇದಿಕೆಯ ಎಡಭಾಗದಲ್ಲಿ ಭಸ್ಮ ಕುಂಡವನ್ನು ರೂಪಿಸಲು ದತ್ತಾತ್ರೇಯರು ಹೇಳಿದ್ದರು . ೧೯೬೪ ರಿಂದ ಪದ್ಮಾತಾಯಿಯವರು ನಿರ್ಗಮಿಸಿದ 5-6 ವರ್ಷಗಳವರೆಗೆ, ಭಸ್ಮವು ಭಸ್ಮ ಕುಂಡದಲ್ಲಿ ಬರುತ್ತಿತ್ತು ಮತ್ತು ನಂತರ ಅದು ನಿಂತುಹೋಯಿತು.
ದತ್ತಾತ್ರೇಯರ ಆದೇಶದಂತೆ, ಗರ್ಭಗೃಹದ ಮೆಟ್ಟಿಲುಗಳ ಪಕ್ಕದಲ್ಲಿ ಹೋಮ ಕುಂಡವನ್ನು ನಿರ್ಮಿಸಲಾಗಿದೆ ಮತ್ತು ಇಂದಿಗೂ ಇದು ಪದ್ಮಾತಾಯಿಯವರ ಶಿಲಾ ಮೂರ್ತಿ ಮುಂದೆ ಇದೆ . ಅದನ್ನು ಮುಚ್ಚಿದ ನಂತರ ಇಂದಿನವರೆಗೂ ಅದನ್ನ ತೆರೆದಿಲ್ಲ . ಹೊಸದಾಗಿ ಹೋಮಕುಂಡವನ್ನು ಗರ್ಭಗುಡಿಯ ಎದುರಿಗೆ ನಿರ್ಮಿಸಲಾಗಿದೆ .
ಒಂದು ದಿನ ದತ್ತಾತ್ರೇಯರು , "ಮನೆಯ ಹಿತ್ತಲಿನಲ್ಲಿ ಒಂದು ಔದುಂಬರ ಮರ ಕಾಣಿಸುತ್ತದೆ" ಎಂದು ಹೇಳಿದರು. ಅವರ ಮಾತಿನಂತೆ, ಮರುದಿನ ಔದುಂಬರ ಮರ ಕಾಣಿಸಿಕೊಂಡಿತು ಮತ್ತು ಅದಕ್ಕೆ ಪೂಜೆಯನ್ನು ನೆರೆವೇರಿಸಲಾಯಿತು . ಒಂದು ನಿರ್ದಿಷ್ಟ ಹಂತದ ಬೆಳವಣಿಗೆಯ ನಂತರ ಔದುಂಬರ ಮರವು ಮಂದಿರವನ್ನು ನಿರ್ಮಿಸುವವರೆಗೆ ಸ್ಥಿರವಾಗಿ ಉಳಿಯಿತು. ಮಂದಿರದ ನಿರ್ಮಾಣದ ನಂತರ, ಮರವು ಉಳಿದುಕೊಳ್ಳಲಿಲ್ಲ ಮತ್ತು ಪ್ರಸ್ತುತ ಔದುಂಬರವನ್ನು ಹೊಸದಾಗಿ ನೆಡಬೇಕಾಯಿತು.
ತಾಯಿಯವರ ನಿರ್ಗಮನದ ನಂತರ
ತಾಯಿಯವರ ನಿರ್ಗಮಿಸಿದ ಒಂದೆರಡು ವರ್ಷಗಳ ನಂತರ, ಶಿಷ್ಯರು ಬರುವುದನ್ನು ನಿಲ್ಲಿಸಿದರು. ಶಿಷ್ಯರು ಮತ್ತು ಕುಟುಂಬ ಸದಸ್ಯರ ನಡುವೆ ಸಂಘರ್ಷ ಉಂಟಾಯಿತು. ತರುವಾಯ, ಪೂಜಾ ಚಟುವಟಿಕೆಗಳನ್ನು ನಿಲ್ಲಿಸಲಾಯಿತು. ಆದರೆ, ವೆಂಕಟರಾವ್ ಕುಲಕರ್ಣಿ ಪ್ರತಿ ವರ್ಷ ದತ್ತ ಜಯಂತಿಯನ್ನು ಸ್ವಲ್ಪ ಸಮಯದವರೆಗೆ ಆಚರಿಸುತ್ತಿದ್ದರು. ಈ ಅವಧಿಯಲ್ಲಿಯೂ ಭಸ್ಮ , ಭಸ್ಮಕುಂಡದಲ್ಲಿ ಕಾಣಿಸಿಕೊಳ್ಳುತ್ತಿತ್ತು . ಕೊನೆಯ 2 ಹೆಣ್ಣುಮಕ್ಕಳ ಮದುವೆಗೆ ಹಣ ವ್ಯವಸ್ಥೆ ಮಾಡಲು ವೆಂಕಟರಾವ್‌ಗೆ ಕಷ್ಟವಾಯಿತು, ಆದರೆ ತಾಯಿಯವರ ಶಿಷ್ಯರು ಒಟ್ಟಾಗಿ ಅವರ ವಿವಾಹ ಸಮಾರಂಭವನ್ನು ನಡೆಸಿದರು.
ಪೂಜಾ ಚಟುವಟಿಕೆಗಳನ್ನು ನಿಯಮಿತವಾಗಿ ನಿರ್ವಹಿಸುವ ಉದ್ದೇಶದಿಂದ ಕೊನೆಯ ಮಗಳು ನಳಿನಿ ಹೆಸರಿನಲ್ಲಿರುವ ಮನೆ ಮತ್ತು ಭೂ ಆಸ್ತಿಯನ್ನು ಶ್ರೀ ಶಂಕರ್ (ಪದ್ಮಾತಾಯಿಯವರ ಮಲ ಮಗ) ಗೆ ವರ್ಗಾಯಿಸಲಾಯಿತು. ಆದಾಗ್ಯೂ ನಿರೀಕ್ಷೆಯಂತೆ ಕಾರ್ಯಗಳು ಅವರಿಂದ ನಿರ್ವಹಿಸಲಾಗಿಲ್ಲ . ಏತನ್ಮಧ್ಯೆ, ವೆಂಕಟರಾವ್ ಕುಲಕರ್ಣಿಯ ಹಿರಿಯ ಸಹೋದರನ ಮಗನಾದ ಶ್ರೀ ವಲ್ಲಭ ಚೈತನ್ಯ (ಇವರನ್ನು ಮೊದಲು ಶ್ರೀ ವಲ್ಲಭ ಎಂದು ಕರೆಯಲಾಗುತ್ತಿತ್ತು) ಹೊಸೂರಿಗೆ ಬಂದು ಗಾಯತ್ರಿ ದೇವಿಯ ಪೂಜೆಯನ್ನು ಮಾಡಲು ಪ್ರಾರಂಭಿಸಿದರು. ಅವರು 3 ವರ್ಷಗಳ ಕಾಲ ಅಲ್ಲಿದ್ದರು ಮತ್ತು ಆ ಅವಧಿಯಲ್ಲಿ ಅವರು ದತ್ತ ಜಯಂತಿಯನ್ನೂ ಆಚರಿಸಿದರು. ಹೊಸೂರು ದತ್ತ ಮಂದಿರದಲ್ಲಿ ಅವರು ಎಲ್ಲಾ ಪೂಜಾ ಚಟುವಟಿಕೆಗಳನ್ನು ಮುಂದುವರಿಸುತ್ತಾರೆ ಎಂದು ಜನರು ಭಾವಿಸಿದ್ದರು. ಹೊಸೂರಿನಲ್ಲಿ ಉಳಿಯಲು ಅವರು ಶಂಕರ ಅವರ ಹೆಸರಿನಲ್ಲಿರುವ ಮನೆಯನ್ನು ವರ್ಗಾವಣೆ ಮಾಡುವಂತೆ ಶ್ರೀ ಶಂಕರ್ ಅವರನ್ನು ವಿನಂತಿಸಿದರು. ಆದರೆ ಶ್ರೀಶಂಕರ್ ಒಪ್ಪಲಿಲ್ಲ ಮತ್ತು ಅವರನ್ನು ಮನೆಯನ್ನು ತ್ಯಜಿಸುವಂತೆ ಹೇಳಿದರು. ತರುವಾಯ ಶ್ರೀ ವಲ್ಲಭ್ ಅವರು ತಮ್ಮದೇ ಆದ ಗಾಯತ್ರಿ ತಪಭೂಮಿಯನ್ನು ತಡಸ ಕತ್ತರಿ ಹತ್ತಿರ ಸ್ಥಾಪಿಸಿದರು . ನಂತರ ಶ್ರೀ ವಲ್ಲಭ ಇವರು , ಶ್ರೀ ವಲ್ಲಭ ಚೈತನ್ಯರೆಂದು ಕರೆಯಲ್ಪಟ್ಟರು .
ದತ್ತಸ್ವರೂಪಿ ಪದ್ಮಟೈ ಸೇವಾ ಸಮಿತಿ ಟ್ರಸ್ಟ್ ಮತ್ತು ಶ್ರೀ ಕ್ಷೇತ್ರ ಹೊಸೂರಿನಲ್ಲಿ ಹೊಸ ಪದ್ಮತೈ-ಗುರುದತ್ತ ಮಂದಿರ ಸ್ಥಾಪನೆ
ಶ್ರೀ ವಲ್ಲಭ ಅವರ ನಿರ್ಗಮನದ ನಂತರ, ಶಂಕರ್ ಪೂಜಾ ಚಟುವಟಿಕೆಗಳನ್ನು ಸ್ವಲ್ಪ ಮಟ್ಟಿಗೆ ಮುಂದುವರಿಸಿದರು. ಸ್ವಲ್ಪ ಸಮಯದ ನಂತರ ಅವರು ಅದನ್ನು ಶ್ರೀ ಸನ್ನಿಧಿ ಆಶ್ರಮಕ್ಕೆ ಉಡುಗೊರೆಯಾಗಿ ನೀಡಲು ಮನಸ್ಸು ಮಾಡಿದರು. ಈ ನಿಟ್ಟಿನಲ್ಲಿ ಡಾ.ಸುಧಾ ನಾಗರಕಟ್ಟಿ ಮತ್ತು ಶ್ರೀಶಂಕರ್ ನಡುವಿನ ಸಂವಹನವು ನಿರೀಕ್ಷಿತ ಫಲಿತಾಂಶವನ್ನು ನೀಡಿಲ್ಲ. ಈ ಅವಧಿಯಲ್ಲಿ, ನಾನು, ಡಾ. ಕನಮಡಿ , ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಹೊಸೂರು ದತ್ತ ಮಂದಿರಕ್ಕೆ ನಿಯಮಿತವಾಗಿ ಭೇಟಿ ನೀಡುತ್ತಿದ್ದೆ. ಅಂತಹ ಒಂದು ಭೇಟಿಯ ಸಮಯದಲ್ಲಿ, ಶ್ರೀ ಶಂಕರ್ ಅವರು ಈ ಆಸ್ತಿಯನ್ನು ದತ್ತ ಮಂದಿರ ನಿರ್ಮಾಣಕ್ಕಾಗಿ ವರ್ಗಾಯಿಸುವುದಾಗಿ ಹೇಳಿದರು. ಆದರೆ ಈ ಆಸ್ತಿಯ ಮೇಲೆ, ಶ್ರೀಶಂಕರ್ ಅವರು 2.5 ಲಕ್ಷ ರೂಪಾಯಿಗಳ ಸಾಲವನ್ನು ಹೊಂದಿದ್ದರು ಮತ್ತು ಅದರ ಸಾಲವನ್ನು ತೆರವುಗೊಳಿಸಲು ನನ್ನನ್ನು ಕೇಳಿದರು ಮತ್ತು ಈಗಿರುವ ದೇವಾಲಯದ ಬದಿಯಲ್ಲಿ ಅವರಿಗೆ ಒಂದು ಮನೆಯನ್ನ ನಿರ್ಮಿಸಕೊಡಬೇಕು ಎಂದಾಗ ನಾನು ಒಪ್ಪಿಕೊಂಡೆ. ಅದರಂತೆ ನಾವು ಶ್ರೀ ದತ್ತಸ್ವರೂಪಿ ಸೇವಾ ಸಮಿತಿ ಟ್ರಸ್ಟ್ ರಚಿಸಿ ಸಮಿತಿಯ ಸದಸ್ಯರು ಹಣವನ್ನು ಸಂಗ್ರಹಿಸಿ ಆಸ್ತಿಯ ಸಾಲವನ್ನು ತೆರವುಗೊಳಿಸಿದೆವು . ಆಸ್ತಿಯನ್ನು ಟ್ರಸ್ಟ್‌ಗೆ ವರ್ಗಾಯಿಸಲಾಯಿತು. ನಾವು ಕೊಟ್ಟ ಮಾತಿನಂತೆ , ನಾವು ಶಂಕರ್‌ಗಾಗಿ ಮನೆ ನಿರ್ಮಿಸಿದ್ದೇವೆ ಮತ್ತು ಉದ್ಘಾಟನಾ ಸಮಾರಂಭದ ಖರ್ಚುಗಳನ್ನು ಸಹ ಟ್ರಸ್ಟ್ ಭರಿಸಿತು . ಈಗಿರುವ ದೇವಾಲಯದ ನಿರ್ಮಾಣಕ್ಕಾಗಿ ಆಸ್ತಿಯ ಸಾಲವನ್ನು ತೆರವುಗೊಳಿಸಲಾಯಿತು . ಡಾ.ಸುಧಾ ನಾಗರಕಟ್ಟಿ ಅವರು ತಮ್ಮ ಮನೆಯನ್ನು ಮಾರಿ ಮಾರಾಟದಿಂದ ಬಂದ ಎಲ್ಲಾ ಹಣವನ್ನು ಅಂದರೆ 13 ಲಕ್ಷ ರೂಪಾಯಿಗಳನ್ನು ದೇವಾಲಯದ ನಿರ್ಮಾಣಕ್ಕಾಗಿ ಟ್ರಸ್ಟ್‌ಗೆ ನೀಡಿದರು. ದೇವಾಲಯದ ಭೂಮಿ ಪೂಜೆಯನ್ನು 2010 ರಲ್ಲಿ ನಡೆಸಲಾಯಿತು ಮತ್ತು ಹೀಗೆ ದೇವಾಲಯದ ನಿರ್ಮಾಣ ಪ್ರಾರಂಭವಾಯಿತು. ದುರದೃಷ್ಟವಶಾತ್, ನಮ್ಮ ಎಂಜಿನಿಯರ್ ಮತ್ತು ಶ್ರೀ ಸಿ.ಆರ್.ಪಾಟೀಲ್ ಅವರ ಪುತ್ರ ಶ್ರೀ ದತ್ತಸ್ವರೂಪಿ ಪದ್ಮಾತಾಯಿ ಭಕ್ತ ಶ್ರೀ ರಾಮು ಪಾಟೀಲ್ ಅವರು ಮೋಟಾರ್ ಸೈಕಲ್ ಅಪಘಾತದಲ್ಲಿ ದೇಹ ತ್ಯಾಗ ಮಾಡಿದರು. ಆದ್ದರಿಂದ ನಿರ್ಮಾಣವನ್ನು ಸ್ವಲ್ಪ ಸಮಯದವರೆಗೆ ಸ್ಥಗಿತಗೊಳಿಸಲಾಯಿತು. ಈ ಹಂತದಲ್ಲಿ ಗುರುಜಿ ನನಗೆ ಒಂದು ಸಂದೇಶವನ್ನು ನೀಡಿದರು, "ಸನ್ಯಾಸಿ ಈ ಸ್ಥಳಕ್ಕೆ ಭೇಟಿ ನೀಡಬೇಕಾಗಿದೆ, ಇದರಿಂದಾಗಿ ಮುಂದಿನ ನಿರ್ಮಾಣ ಸುಗಮವಾಗಿರುತ್ತದೆ" ಎಂದು . ಚಿತ್ರದುರ್ಗದ ಸದ್ಗುರು ಆಶ್ರಮದ ಸನ್ಯಾಸಿ ಶ್ರೀಕಾನಂದತೀರ್ತ ಸ್ವಾಮೀಜಿಯ ಭೇಟಿಯ ನಂತರ ನಿರ್ಮಾಣ ಕಾರ್ಯ ಪುನರಾರಂಭವಾಯಿತು. ಶಿಷ್ಯರು ಉದಾರವಾಗಿ ದೇಣಿಗೆ ನೀಡಿದರು ಮತ್ತು ನಿರ್ಮಾಣಕ್ಕಾಗಿ ಎಲ್ಲಾ ಮೂಲೆಗಳಿಂದ ಹಣವು ಹರಿದು ಬಂತು . 13 ಲಕ್ಷ ರೂಪಾಯಿ ಬೀಜ ಹಣದಿಂದ ನಿರ್ಮಾಣ ಪ್ರಾರಂಭವಾಯಿತು, ಆದರೆ ಶಿಷ್ಯರ ಔದಾರ್ಯದದ ದಾನದಿಂದ ನಾವು 32,01,000 ರೂಪಾಯಿಗಳನ್ನು ಖರ್ಚು ನೀಗಿಸಲು ಸಹಾಯವಾಯಿತು . ಹೀಗೆ , ಶ್ರೀ ಸತ್ತಸ್ವರೂಪಿ ಪದ್ಮತಾಅಯಿ ದತ್ತ ಮಂದಿರವು , ಶ್ರೀ ಕ್ಷೇತ್ರ ಹೊಸೂರಿನಲ್ಲಿ ಸ್ಥಾಪನೆಯಾಯಿತು.
ದೇವಾಲಯದ ವಾಸ್ತುಶಿಲ್ಪ
ಗರ್ಭಗುಡಿ
ಪಶ್ಚಿಮದಲ್ಲಿ ಪ್ಲಾಟ್‌ಫಾರ್ಮ್‌ನ ಹಿಂದಿನ ಗೋಡೆ ಮತ್ತು ಉತ್ತರಕ್ಕೆ ಅದರ ಪಕ್ಕದ ಗೋಡಗಳನ್ನೂ ಹಾಗೆ ಉಳಿಸಿಕೊಂಡಿದೆ. ಪದ್ಮಾತಾಯಿಯವರ ಕಾಲದಲ್ಲಿ ರೂಪುಗೊಂಡ ವೇದಿಕೆಯನ್ನು ಈಗಲೂ ಅದೇ ಸ್ಥಳದಲ್ಲಿ ಉಳಿಸಿಕೊಳ್ಳಲಾಗಿದೆ. ದತ್ತಾತ್ರೇಯರ ಶಿಲಾ-ಮೂರ್ತಿ ಅಲ್ಲಿ ವಿರಾಜಮಾನವಾಗಿದೆ. ಹೋಮ ಕುಂಡ ಇನ್ನೂ ಅಸ್ತಿತ್ವದಲ್ಲಿದೆ ಆದರೆ ಕಲ್ಲಿನ ಚಪ್ಪಡಿಯಿಂದ ಮುಚ್ಚಲ್ಪಟ್ಟಿದೆ ಮತ್ತು ಈಗ ಹೋಮ ಕುಂಡದ ಮುಂದೆ ಶ್ರೀ ದತ್ತಸ್ವರೂಪಿ ಪದ್ಮಾತಾಯಿಯವರ ವಿಗ್ರಹವಿದೆ.
ಈಗ ಮುಚ್ಚಿದ ಭಸ್ಮ ಕುಂಡ ದತ್ತರ ವಿಗ್ರಹದ ಎಡಭಾಗದಲ್ಲಿ ಇನ್ನೂ ಇದೆ. ಕಲ್ಲಿನ ಚಪ್ಪಡಿಯ ಮೇಲೆ ಸ್ವಯಂ ರೂಪುಗೊಂಡ ಪಾದುಕೆಗಳನ್ನು ದತ್ತರ ಮತ್ತು ಪದ್ಮತಾಯಿಯವರ ಮುಂದೆ ಸ್ಥಾಪಿಸಲಾಗಿದೆ . ಗರ್ಭಗುಡಿಯ ಹೊರಗಿನ ಸ್ಥಳದಲ್ಲಿ , ಗರ್ಭಗುಡಿ ಪ್ರವೇಶದ್ವಾರದ ಹೊರಗಡೆ ಹೊಸ ಹೋಮ ಕುಂಡವನ್ನು ನಿರ್ಮಿಸಲಾಗಿದ್ದು, ಅದನ್ನು ಹೊಂದಿಕೊಂಡು ಹಾಲ್ ಕೂಡ ಆಗಿದೆ . ಗರ್ಭಗುಡಿಯ ಸುತ್ತಲೂ ಒಂದು ಪ್ರಕಾರವಿದೆ. ಗರ್ಭಗುಡಿಯ ಒಂದು ಬಲಭಾಗವು ದಕ್ಷಿಣ ಭಾಗದ ಪ್ರವೇಶದ್ವಾರ / ಹಿತ್ತಲಿನಲ್ಲಿ ನಿರ್ಗಮಿಸಿದರೆ ಪ್ರಸ್ತುತ ಅಡುಗೆ ಮನೆಯನ್ನ ನಿರ್ಮಿಸಲಾಗಿದೆ ಮತ್ತು ಸಣ್ಣದಾದ ಊಟಕ್ಕೆ ಬಡಿಸುವ ಪ್ರಾಕಾರವನ್ನು ಕಟ್ಟಿಸಲಾಗಿದೆ . ಔದುಂಬರ ವೃಕ್ಷದ ಪಕ್ಕದಲ್ಲಿ ದೇವಾಲಯದ ಅರ್ಚಕರಿಗೆ ಮನೆ ಮಾಡಿಕೊಡಲಾಗಿದೆ.
ಗೋಪುರ
ಗೋಪುರ ಕೊಲ್ಹಾಪುರ ಮಹಾಲಕ್ಷ್ಮಿ ದೇವಾಲಯದ ಗೋಪುರದಂತೆಯೇ ವಾಸ್ತುಶಿಲ್ಪವನ್ನು ಹೊಂದಿದೆ.
ಬಾಹ್ಯ
ಪೂರ್ವದ ಮುಖ್ಯ ದ್ವಾರವು ಮರದ ಬಾಗಿಲುಗಳೊಂದಿಗೆ ದೊಡ್ಡ ಪ್ರವೇಶವನ್ನು ಹೊಂದಿದೆ. ದೇವಾಲಯದ ಮೇಲ್ಭಾಗವನ್ನು ದತ್ತಾತ್ರೇಯರ ಮತ್ತು ಶ್ರೀ ದತ್ತಸ್ವರೂಪಿ ಪದ್ಮಾತಾಯಿಯವರ ವಿಗ್ರಹಗಳಿಂದ ಅಲಂಕರಿಸಲಾಗಿದೆ.
ಶ್ರೀ ಕುಂಜ ಭವನ
ಈಗಿನ ಶ್ರೀ ಕುಂಜ್ ಭವನದ ಜಾಗವು, ಈ ಹಿಂದೆ ಸಾವಾಜಿ ಕುಟುಂಬದ ಒಡೆತನದಲ್ಲಿತ್ತು. ದತ್ತಸ್ವರೂಪಿ ಪದ್ಮಾತಾಯಿಯವರು ಕಷ್ಟದಲ್ಲಿದ್ದಾಗಲೆಲ್ಲಾ ತಮ್ಮ ವಸ್ತುಗಳನ್ನು ಆ ಕುಟುಂಬವರಲ್ಲಿ ಗಿರವಿ ಇಡುತ್ತಿದ್ದರು. ದತ್ತಸ್ವರೂಪಿ ಪದ್ಮಾತಾಯಿಯವರ ನಿರ್ಗಮನದ ನಂತರ, ನಾನು ವೈಯಕ್ತಿಕವಾಗಿ ಇತರರೊಂದಿಗೆ ಹೋಗಿ ಆ ಕುಟುಂಬದವರನ್ನ ಭೇಟಿ ನೀಡಿ, ನಾವು ಹಣವನ್ನು ನೀಡಲು ಸಿದ್ಧರಾಗಿರುವುದರಿಂದ ಪದ್ಮಾತಾಯಿಯವರು ಅವರಲ್ಲಿ ಗಿರವಿ ಇಟ್ಟಿದ್ದ ಸಿಲ್ಕ್ ಸೀರೆಯನ್ನು ಹಿಂದಿರುಗಿಸಲು ವಿನಂತಿಸಿದೆ, ಆದರೆ ಆ ಮನೆಯ ಮಹಿಳೆ ಒಪ್ಪಲಿಲ್ಲ. ಆ ಸಮಯದಿಂದ ನಾನು ಆ ಆಸ್ತಿಯ ಬಗ್ಗೆ ಒಂದು ರೀತಿಯ ಸದುದ್ದೇಶವನ್ನ ಹೊಂದಿದ್ದೆ, ಆದರೆ ನಾನು ಅದಕ್ಕಾಗಿ ಪ್ರಾರ್ಥಿಸಲಿಲ್ಲ. ಈ ಹೊತ್ತಿಗೆ ಆ ಆಸ್ತಿಯನ್ನು ಸಾವಾಜಿ ಕುಟುಂಬವು ಇತರರಿಗೆ ಮಾರಿಬಿಟ್ಟಿದ್ದರು ಮತ್ತು ಅವರು ಹೊಸೂರಿನಿಂದ ಹುಬ್ಬಳ್ಳಿಗೆ ಹೋಗಿ ಸೇರಿದ್ದರು .
ಈಗ ಆಸ್ತಿ ಎರಡು `ಜನರ ಹೆಸರಿನಲ್ಲಿತ್ತು.ನಾನು ದಸೋಹಾ ಸಭಾಂಗಣಕ್ಕಾಗಿ ಮತ್ತು ಹೊಸೂರು ಪದ್ಮಾತಾಯಿ -ದತ್ತ ಮಂದಿರಕ್ಕೆ ಭೇಟಿ ನೀಡುವ ಭಕ್ತರಿಗೆ ಉಳಿದುಕೊಳ್ಳಲು ಎರಡು ಕೊಠಡಿ ಉದ್ದೇಶಕ್ಕಾಗಿ ಆ ಆಸ್ತಿಯನ್ನು ಖರೀದಿಸಬೇಕೆಂದಿದ್ದೆ. ನನ್ನ ಹತ್ತಿರ ಅಷ್ಟು ದುಡ್ಡಿರಲಿಲ್ಲ ಮತ್ತು ಟ್ರಸ್ಟ್‌ನ ಸದಸ್ಯರಿಗೆ ಆ ಆಸ್ತಿಯನ್ನು ಖರೀದಿಸುವ ಸಾಮರ್ಥ್ಯವೂ ಇರಲಿಲ್ಲ. ಸ್ವಲ್ಪ ದಿವಸಗಳ ನಂತರ ಆ ಎರಡು ಗುಂಟಾ ಜಮೀನಿನ ಮಾಲೀಕರು ಆಸ್ತಿಯನ್ನು ಮಾರಾಟ ಮಾಡಲು ಮುಂದೆ ಬಂದರು. ಆಗ ಈ ಅವಕಾಶವನ್ನು ನಾನು ಬಿಡಬಾರದು ಎಂದು ಭಾವಿಸಿದೆ. ಈ ಹಂತದಲ್ಲಿ 50% ಮೊತ್ತವನ್ನು ದೇಣಿಗೆ ನೀಡಿದ
ಡಾ.ಮಲ್ಲಿಕರ್ಜುನಪ್ಪ ಅವರು ಮತ್ತು ಅವರ ಪುತ್ರರನ್ನು ನಾನು ಈ ಸಮಯದಲ್ಲಿ ನೆನಪಿಸಿಕೊಳ್ಳಬೇಕು. ನನ್ನ ಎಂಫಿಲ್ ವಿದ್ಯಾರ್ಥಿಯಾಗಿದ್ದ ಶ್ರೀ ಹರ್ಷ ನೀಲ್ಗುಂದ್ ಅವರು ನನಗೆ 1.5 ಲಕ್ಷ ಸಾಲವನ್ನು ನೀಡಿದರು ಮತ್ತು ನಂತರ ಅವರು ಆ ಜಾಗೆಯನ್ನು ಖರೀದಿಸಲು ಆ ಹಣವನ್ನು ಉಡುಗೊರೆಯಾಗಿ ನೀಡಿದರು. ಉಳಿದ ಮೊತ್ತವನ್ನು ನನ್ನ ಉಳಿತಾಯದ ಹಣದಿಂದ ವ್ಯವಸ್ಥೆ ಮಾಡಿದೆ . ಹೀಗಾಗಿ 2 ಗುಂಟಾ ಕಾರ್ನರ್ ಜಾಗೆಯನ್ನು ಖರೀದಿಸಲಾಯಿತು. ಉಳಿದ ಒಂದು ಗುಂಟಾವನ್ನು ನಂತರ ಖರೀದಿಸಲಾಯಿತು. ಇದು ನನ್ನ ಜೀವನದ ಅತ್ಯಂತ ಅನಿರೀಕ್ಷಿತ ಘಟನೆ. ಇಲ್ಲಿ ಮೊದಲು ಶೌಚಾಲಯ ಮತ್ತು ಸ್ನಾನಗೃಹಗಳನ್ನು ನಿರ್ಮಿಸಲು ಪ್ರಾರಂಭಿಸಿದೆವು.
ನಾವು 6.5 ಲಕ್ಷ ರೂಪಾಯಿ ಬೀಜದ ಹಣದಿಂದ ನಿರ್ಮಾಣವನ್ನು ಪ್ರಾರಂಭಿಸಿದೆವು , ಆದರೆ ಶಿಷ್ಯರಿಂದ ಉದಾರ ದೇಣಿಗೆಯೊಂದಿಗೆ ನಾವು ಸುಮಾರು 40 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಲು ಸಾಧ್ಯವಾಯಿತು . ಪ್ರಸ್ತುತ ದಾಸೋಹಾ ಸಭಾಂಗಣವನ್ನು ನಿರ್ಮಿಸುವ ಯಾವುದೇ ಯೋಜನೆ ಇರಲಿಲ್ಲ. ಶೌಚಾಲಯಗಳು , ಸ್ನಾನಗೃಹಗಳು ಮತ್ತು ದೇವಾಲಯದ ಅರ್ಚಕರಿಗೆ ಎರಡು ಕೊಠಡಿಗಳ ನಿರ್ಮಾಣದ ಅಂತ್ಯದ ವೇಳೆಗೆ . ನನಗೆ ಒಂದು ದಾಸೋಹಕ್ಕೆ ದೊಡ್ಡ ಹಾಲನ್ನು ನಿರ್ಮಿಸಬೇಕೆಂದು ಇಚ್ಛೆಯಾಗಿ , ನಾನು ಪ್ರಾರ್ಥನೆ ಸಲ್ಲಿಸಲು ಕೊಲ್ಹಾಪುರ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಹೋದೆ. ನಾನು ಪ್ರದಕ್ಷಿಣೆ ಹಾಕೋವಾಗ , ದೇವಾಲಯದ ಹಿಂಭಾಗದಲ್ಲಿ ನಾನು ದೇವಿ ಮಹಲಕ್ಷ್ಮಿಯನ್ನು ನನ್ನ ಮನಸ್ಸಿನಲ್ಲಿ , "ದಾಸೋಹಾ ಹಾಲ್ ಪೂರ್ಣಗೊಳ್ಳುವವರೆಗೆ ನಾನು ನಿನ್ನ ದರ್ಶನಕ್ಕೆ ಬರುವುದಿಲ್ಲ" ಎಂದು ಪ್ರಾರ್ಥಿಸಿದೆ. ನಿಖರವಾಗಿ 10 ದಿನಗಳ ನಂತರ, ಹೊಸೂರಿನಲ್ಲಿ ಪ್ರಸ್ತುತ ದಾಸೋಹಾ ಸಭಾಂಗಣದ ಸಂಪೂರ್ಣ ನಿರ್ಮಾಣಾ ಕಾರ್ಯ ಪೂರ್ಣಗೊಂಡಿತು .ನಂತರ ನಾನು ಮಹಾಲಕ್ಷ್ಮಿಯ ದೇವಾಲಯಕ್ಕೆ ಭೇಟಿನೀಡಿ ನನ್ನ ಪ್ರಣಾಮಗಳನ್ನು ದೇವಿಯಲ್ಲಿ ಸಲ್ಲಿಸಿಬಂದೆ .
ನನ್ನ 29 ವರುಷದ ವಯಸ್ಸಿನಿಂದ , ಶ್ರೀ ದತ್ತ ಸ್ವರೂಪಿ ಪದ್ಮತಾಯಿಯವರ ದರ್ಶನದಿಂದ, ಸನ್ನಿಧಿ ಆಶ್ರಮದ ಬೆಳವಣಿಗೆ, ಮಂದಿರದ ನಿರ್ಮಾಣದವರೆಗಿನ ಕಥೆ , ನನ್ನ ಜೀವನದ ಕೊನೆಯವರೆಗೂ ಸಾಗುತ್ತದೆ ಮತ್ತು ಅದು ತಾಯಿಯವರ ಮತ್ತು ದತ್ತಾತ್ರೇಯರ ಆಶೀರ್ವಾದದಿಂದ ಮುಂದುವರಿಯುತ್ತದೆ.
ಹೊಸೂರು ಮಂದಿರ ನಿರ್ಮಾಣದವರೆಗೂ ಶ್ರೀ ವಿದ್ಯಾಧರತೀರ್ಥ ಗುರು ಪೂರ್ಣಿಮೆಯನ್ನು ಆಚರಿಸಲಿಲ್ಲ. ದತ್ತ ಮಂದಿರ ನಿರ್ಮಾಣದ ನಂತರ ಹೊಸೂರಿನಲ್ಲಿ ಗುರು ಪೂರ್ಣಿಮಾ ಆಚರಿಸಲು ಪ್ರಾರಂಭಿಸಲಾಯಿತು . ಪದ್ಮತಾಯಿ- ದತ್ತ ಮಂದಿರ ಸ್ಥಾಪನೆಯಾದ ನೆನಪಿಗಾಗಿ ಪ್ರತಿವರ್ಷ ಹೊಸೂರಿನಲ್ಲಿ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತದೆ . ಶ್ರೀ ದತ್ತ ಸ್ವರೂಪಿ ಪದ್ಮಾತಾಯಿ ಕಾಲದಿಂದಲೂ ದತ್ತಜಯಂತಿಯ ಎರಡನೇ ದಿನ ಪ್ರಾಮುಖ್ಯತೆ ಇದ್ದು ದತ್ತರ ಹೋಮವನ್ನು ಆಚರಿಸುಲಾಗುತ್ತದೆ.
ದತ್ತಸ್ವರೂಪಿ ಪದ್ಮಾತಾಯಿಯವರು ದತ್ತನಲ್ಲಿ "ನಿಮ್ಮ ಅಸ್ತಿತ್ವವು ವಿಶ್ವಾದ್ಯಂತ ಇದೆ . ನಿಮ್ಮಲ್ಲಿ ಕೋಟ್ಯಂತರ ಶಿಷ್ಯರಿದ್ದಾರೆ. ಇತರ ಸ್ಥಳಗಳಲ್ಲಿ ಹೊರಗಡೆ ಇದ್ದುಕೊಂಡು ಹೊಸೂರನ್ನು ನೋಡಬೇಡಿ ಬದಲಾಗಿ ಹೊಸೂರಿನಲ್ಲಿದ್ದು ನೀವು ಜಗತ್ತನ್ನು ನೋಡಬೇಕು ಎಂಬುದು ನನ್ನ ಆಸೆ" ಎಂದು ಪ್ರಾರ್ಥಿಸಿದರು.
ಹೀಗೆ ಹೊಸೂರು ಈಗ ಶ್ರೀ ಕ್ಷೇತ್ರ ಹೊಸೂರು ಆಗಿ ದತ್ತಾತ್ರೇಯರು ಮತ್ತು ಶ್ರೀ ದತ್ತಸ್ವರೂಪಿ ಪದ್ಮಾತಾಯಿಯವರು ನೆಲಿಸಿರುವ ಒಂದು ಜಾಗೃತ ಸ್ಥಾನ , ಒಂದು ಪವಿತ್ರ ಸ್ಥಳವಾಗಿದೆ. ಈ ಮಂದಿರಕ್ಕೆ ಆಶೀರ್ವಾದ ಬಯಸಿಬಂದ ಎಲ್ಲ ಭಕ್ತರಿಗೆ ಸುಖ, ಶಾಂತಿ, ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.