ನಮ್ಮ ಬಗ್ಗೆ
www.shrisannidhi.com ಅಂತರ್ಜಾಲ ಸೈಟ್ ಅನ್ನು ಶ್ರೀ ದತ್ತಸ್ವರೂಪಿ ಪದ್ಮಾತಾಯಿಯವರ ದೈವಿಕ ಜಗತ್ತಿಗೆ ಸಂಪರ್ಕಿಸುವ ಆನ್‌ಲೈನ್ ವೇದಿಕೆಯಾಗಿದೆ.
ಈ ಅಧಿಕೃತ ವೆಬ್‌ಸೈಟ್ ಶ್ರೀ ದತ್ತಸ್ವರೂಪಿ ಪದ್ಮಾತಾಯಿ, ಶ್ರೀ ಸನ್ನಿಧಿ ಮತ್ತು ಹೊಸೂರಿನಲ್ಲಿರುವ ಪದ್ಮಾತಾಯಿ -ದತ್ತ ಮಂದಿರ್ ಹೇಗೆ ರೂಪುಗೊಂಡಿತು ಎಂಬುದರ ಇತಿಹಾಸಕ್ಕೆ ಕನ್ನಡಿ ಆಗಿದೆ . ಭಕ್ತರಿಗೆ ಶ್ರೀ ಸನ್ನಿಧಿ ಆಶ್ರಮದಲ್ಲಿ ಮತ್ತು ಹೊಸೂರಿನಲ್ಲಿರುವ ಗುರುದತ್ತ ಮಂದಿರದಲ್ಲಿ ನಡೆಯುವ ಕಾರ್ಯಕ್ರಮಗಳು, ಮತ್ತುಕಾರ್ಯಕ್ರಮಗಳೊಂದಿಗೆ ಸಂಪರ್ಕದಲ್ಲಿರಲು ಸಹಾಯ ಮಾಡುತ್ತದೆ . ಶ್ರೀ ದತ್ತಸ್ವರೂಪಿ ಪದ್ಮಾತಾಯಿಗೆ ಸಂಬಂಧಿಸಿದ ಭಾವ ಚಿತ್ರಗಳು, ಹಾಡುಗಳು ಮತ್ತು ವೀಡಿಯೊಗಳನ್ನು ಡೌನ್‌ಲೋಡ್ ಮಾಡಲು ಗ್ಯಾಲರಿ ಮತ್ತು ಡೌನ್‌ಲೋಡ್ ವಿಭಾಗಕ್ಕೂ ಭೇಟಿ ನೀಡಬಹುದು. ನೀವು ಕಂಡಂತೆ ತಾಯಿಯವರ ಲೀಲೆಗಳನ್ನು ಬ್ಲಾಗ್ ನಲ್ಲಿ ಬರೆಯಬಹುದು .
ಏಳು ವರ್ಷಗಳ ಹಿಂದೆ ರೂಪುಗೊಂಡ ದೇವಾಲಯದ ಟ್ರಸ್ಟ್ ಮಂದಿರ ಮತ್ತು ಆಶ್ರಮದ ಪ್ರತಿಯೊಂದು ಅಂಶವನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿದೆ. ಈ ವೆಬ್ಸೈಟ್ ಅನ್ನು ೨೦೨೦ ರ ಗುರುಪೂರ್ಣಿಮೆಯಂದು ನಿಮ್ಮ ಮುಂದೆ ಬಿತ್ತರಿಸಿದ್ದಾರೆ .
ಆಶೀರ್ವಾದ
ಶ್ರೀ ಗುರುದತ್ತ ಮಹಾರಾಜ್
ಶ್ರೀ ದತ್ತಸ್ವರೂಪಿ ಪದ್ಮಾತಾಯಿ
ಶ್ರೀ ವಿದ್ಯಾಧರತೀರ್ಥ ಗೂರುಜಿ
ದತ್ತಾತ್ರೇಯರು ದೈವಿಕ ತ್ರಿಮೂರ್ತಿಗಳಾದ ಬ್ರಹ್ಮ , ವಿಷ್ಣು ಮತ್ತು ಶಿವನ ಅವತಾರ.ತ್ರಿಮೂರ್ತಿಗಳು ಅತ್ರಿ ಮತ್ತು ಅನಸೂಯ ಋಷಿ ದಂಪಗಳಿಗೆ ಮಗನ ರೂಪದಲ್ಲಿ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ . ಅವರು ಅತ್ರಿಯ ಮಗ, ಆದ್ದರಿಂದ "ಅತ್ರೇಯ" ಎಂಬ ಹೆಸರು ಬಂದಿದೆ. ಹೀಗಾಗಿ ದತ್ತಾತ್ರೇಯರು ಎಂದು ಕರೆಯಲ್ಪಡುತ್ತಾರೆ.ಲಕ್ಷಾಂತರ ಹಿಂದೂಗಳಿಂದ ಪೂಜಿಸಲ್ಪಟ್ಟ ಅವರನ್ನು ಭಾರತೀಯ ಚಿಂತನೆಯ ದೇವರಾಗಿ ಪೂಜಿಸಲಾಗುತ್ತದೆ .
ಶ್ರೀ ದತ್ತಸ್ವರೂಪಿ ಪದ್ಮಾತಾಯಿಯವರು ಶ್ರೀ ಗುರು ದತ್ತಾತ್ರೇಯರ ನಾಲ್ಕನೇಯ ಅವತಾರವೆಂದು ಪೂಜಿಸಲ್ಪಡುತ್ತಿದ್ದಾರೆ , ಹಿಂದಿನ ಆರು ಜನುಮಗಳಿಂದ ಶ್ರೀ ಗುರು ದತ್ತಾತ್ರೇಯರಿಗೆ ಸಮರ್ಪಣೆ ಮತ್ತು ಭಕ್ತಿಯ ಪರಾಕಾಷ್ಠೆಯಿಂದ , ಅವರು 'ಸಿದ್ಧಿಪುರುಷ ' ಎಂಬ ಅಪರೂಪದ ಸ್ಥಾನಮಾನವನ್ನು ತಲುಪಿದರು. ಶ್ರೀ ದತ್ತಸ್ವರೂಪಿ ಪದ್ಮಾತಾಯಿಯವರು ತಮ್ಮ ಬದುಕಿನ ಹಾಗೂ ಮನೆಯಲ್ಲಿರುವ ಎಷ್ಟೇ ಸಮಸ್ಯೆಗಳಿದ್ದರೂ ಅವರ ಜೀವನವು ಸತತ ಸಾಧನೆಯಲ್ಲಿ ನಿರತವಾಗಿತ್ತು. ಶ್ರೀ ದತ್ತಸ್ವರೂಪಿ ಪದ್ಮಾತಾಯಿಯವರು ತಮ್ಮ ಶಿಷ್ಯ ಶ್ರೀ ವಿದ್ಯಾಧರತೀರ್ಥರ ಮೂಲಕ ಭಕ್ತರನ್ನು ಆಶೀರ್ವದಿಸುತ್ತಾ ಬಂದಿದ್ದಾರೆ.
ನಾಸ್ತಿಕರಾದ , ಪ್ರೊ.ಡಾ.ಆರ್.ಡಿ.ಕನಮಡಿ , ಪ್ರಬುದ್ಧ ವಿದ್ವಾಂಸ, ಪ್ರವರ್ತಕ ವಿಜ್ಞಾನಿ, ಶಿಕ್ಷಣ ತಜ್ಞ ಮತ್ತು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಸಮರ್ಥ ಆಡಳಿತಗಾರ. ಅವರ ಗುರು ಶ್ರೀ ದತ್ತಸ್ವರೂಪಿ ಪದ್ಮಾತಾಯಿಯವರ ಆಶೀರ್ವಾದದಿಂದ ಶ್ರೀ ವಿದ್ಯಾಧರತೀರ್ಥರಾಗಿ ಆಗಿ ರೂಪಾಂತರಗೊಂಡರು. ತಾಯಿಯವರ ಮಾರ್ಗದರ್ಶನದಲ್ಲಿ ನಿರಂತರ ಸಾಧನೆ ಮತ್ತು ಧಾರ್ಮಿಕ ಆಚರಣೆಗಳು ತೊಂದರೆಗೀಡಾದ ಹತ್ತಾರು ಜನರಿಗೆ ಸಾಂತ್ವನ ನೀಡುತ್ತಾಇದ್ದಾರೆ .
ನಮ್ಮನ್ನು ಸಂಪರ್ಕಿಸಿ
ಶ್ರೀ ಸನ್ನಿಧಿ ಆಶ್ರಮ
ಕ್ಯಾರಕೊಪ್ಪ ರಸ್ತೆ, ಕ್ಯಾರಕೊಪ್ಪ
ಧಾರವಾಡ
ಕರ್ನಾಟಕ, ಭಾರತ
ದೂರವಾಣಿ ಸಂಖ್ಯೆ: 9535955680
ಇ-ಮೇಲ್: shrisannidhi2917@gmail.com